ನಮ್ಮ ಹೊಲ ನಮ್ಮ ದಾರಿ – ರಸ್ತೆ ಮಾಡಲು ಸರ್ಕಾರ ಕೊಡುತ್ತೆ ₹12.5 ಲಕ್ಷ! ಇಂದೇ ಅರ್ಜಿ ಸಲ್ಲಿಸಿ

On: January 6, 2026 10:45 PM
Follow Us:
namma-hola-namma-daari-scheme
---Advertisement---

Join WhatsApp

Join Now

Join Telegram

Join Now

ಹೊಲ ಹತ್ತಿರವೇ ಇದೆ ಆದರೆ ಟ್ರ್ಯಾಕ್ಟರ್ ಹೋಗಲ್ಲ… ಮಳೆ ಬಂದ್ರೆ ನಡೆದಾಡೋಕೂ ಆಗಲ್ಲ… ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ದಾರಿಯಿಲ್ಲದೆ ಪರದಾಡುವ ರೈತರಿಗಾಗಿಯೇ ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ “ನಮ್ಮ ಹೊಲ ನಮ್ಮ ದಾರಿ” ಎಂಬ ಅದ್ಭುತ ಯೋಜನೆ!

ಏನಿದು ಯೋಜನೆ? ಯಾರೆಲ್ಲಾ ಅರ್ಹರು? ರಸ್ತೆ ಮಂಜೂರು ಮಾಡಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ – ನೋಡಿ, ಅರ್ಜಿ ಸಲ್ಲಿಸಿ, ರಸ್ತೆ ಮಾಡಿಸಿ!

ಏನಿದು “ನಮ್ಮ ಹೊಲ ನಮ್ಮ ದಾರಿ”?

ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ಪಕ್ಕಾ ರಸ್ತೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಗುರಿ.
ಸುಮ್ಮನೆ ಮಣ್ಣಿನ ರಸ್ತೆಯಲ್ಲ, ಪ್ರತಿ 1 ಕಿ.ಮೀ ರಸ್ತೆಗೆ ಬರೋಬ್ಬರಿ 12.50 ಲಕ್ಷ ರೂಪಾಯಿ ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ!

ಉದ್ದೇಶ: ನಿಮ್ಮ ಹೊಲ/ತೋಟಕ್ಕೆ ನೇರವಾಗಿ ಟ್ರ್ಯಾಕ್ಟರ್, ಜೀಪ್ ಹೋಗುವಂತೆ ಮಾಡುವುದು.

ರೈತರಿಗೆ ಏನೇನು ಲಾಭ?

  • ಟ್ರ್ಯಾಕ್ಟರ್ ಮೈಲಿಗೆ ಹೋಗತ್ತೆ: ಹೊಲದ ಬದುವಿನವರೆಗೆ ವಾಹನ ಹೋಗುವಂತೆ ರಸ್ತೆ ನಿರ್ಮಾಣ.
  • ಸಾಗಾಣಿಕೆ ವೆಚ್ಚ ಉಳಿತಾಯ: ತಲೆಯಲ್ಲಿ ಹೊತ್ತು ತರುವ ಕಷ್ಟ ತಪ್ಪುತ್ತೆ, ಲಾರಿ/ಟ್ರ್ಯಾಕ್ಟರ್ ನೇರ ಹೊಲಕ್ಕೆ ಬರುವುದರಿಂದ ಖರ್ಚು ಕಡಿಮೆ.
  • ಕೆಸರಿನ ಕಾಟವಿಲ್ಲ: ಮಳೆಗಾಲದಲ್ಲಿ ಗದ್ದೆಯಂತಾಗುವ ರಸ್ತೆಗಳಿಗೆ ಮುಕ್ತಿ.
  • ರಾತ್ರಿಯೂ ಸಂಚಾರ: ರಸ್ತೆ ಚೆನ್ನಾಗಿದ್ದರೆ ಹಗಲು-ರಾತ್ರಿ ಎನ್ನದೆ ಹೊಲಕ್ಕೆ ಹೋಗಿ ಬರಬಹುದು.

ಇದನ್ನೂ ಓದಿರಿ: Krushi honda subsidy: ರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ! ಇಲ್ಲಿದೆ ಸಂಪೂರ್ಣ ಮಾಹಿತಿ

ಹಣ ಎಲ್ಲಿಂದ ಬರುತ್ತೆ? (₹12.5 ಲಕ್ಷದ ಲೆಕ್ಕಾಚಾರ)

ಈ ಯೋಜನೆಗೆ ಹಣದ ಕೊರತೆಯಿಲ್ಲ!

  • ₹9.00 ಲಕ್ಷ: ನರೇಗಾ (MGNREGA) ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ (ಮೆಟಲಿಂಗ್ ಸೇರಿದಂತೆ).
  • ₹3.50 ಲಕ್ಷ: ರಾಜ್ಯ ಸರ್ಕಾರದ ವಿಶೇಷ ಅನುದಾನ (ಯಂತ್ರಗಳ ಬಳಕೆಗೆ).

ಒಟ್ಟಾರೆ ಒಂದು ಕಿಲೋಮೀಟರ್‌ಗೆ 12.5 ಲಕ್ಷ ರೂ. ಸಿಗಲಿದೆ!

ರಸ್ತೆ ಮಾಡಿಸಲು ಷರತ್ತುಗಳೇನು?

ನಿಮ್ಮ ತೋಟಕ್ಕೆ ರಸ್ತೆ ಬೇಕೆಂದರೆ ಈ ಅಂಶಗಳು ಮುಖ್ಯ:

  1. ದಾಖಲೆಯಲ್ಲಿ ರಸ್ತೆ ಇರಬೇಕು:
    ಗ್ರಾಮ ನಕಾಶೆಯಲ್ಲಿ ಅದು ‘ಬಂಡಿದಾರಿ’, ‘ಕಾಲುದಾರಿ’ ಅಥವಾ ‘ಸರ್ಕಾರಿ ದಾರಿ’ ಎಂದು ನಮೂದಾಗಿರಬೇಕು.
  2. ಒಬ್ಬರಿಗಲ್ಲ, ಊರಿಗಾಗಿ:
    ಕೇವಲ ಒಬ್ಬ ವ್ಯಕ್ತಿಗೆ ದಾರಿ ಮಾಡಿಕೊಡಲ್ಲ. ಆ ರಸ್ತೆಯನ್ನು ಹೆಚ್ಚು ರೈತರು ಬಳಸುವಂತೆರಬೇಕು.
  3. ಜಮೀನು ಬಿಟ್ಟುಕೊಡಬೇಕು:
    ರಸ್ತೆ ಅಗಲ ಮಾಡಲು ಅಕ್ಕಪಕ್ಕದ ರೈತರು ಸ್ವ-ಇಚ್ಛೆಯಿಂದ ಜಾಗ ಬಿಟ್ಟುಕೊಡಬೇಕು (ಇದಕ್ಕೆ ಸರ್ಕಾರ ಪರಿಹಾರ ಹಣ ನೀಡುವುದಿಲ್ಲ, ದಾನಪತ್ರ ಬರೆದುಕೊಡಬೇಕು).

ರಸ್ತೆ ಮಂಜೂರು ಮಾಡಿಸುವುದು ಹೇಗೆ? (Step-by-Step)

ನಿಮ್ಮ ಊರಿನ ರಸ್ತೆ ಮಂಜೂರು ಮಾಡಿಸಲು ನೀವೇ ಮುದಾಗಬೇಕು. ಹೀಗೆ ಮಾಡಿ:

  1. ಮನವಿ ಬರೆಯಿರಿ:
    ರಸ್ತೆ ಇಲ್ಲದೆ ನೀವು ಪಡುತ್ತಿರುವ ಕಷ್ಟವನ್ನು ವಿವರಿಸಿ, ಅಕ್ಕಪಕ್ಕದ ರೈತರೆಲ್ಲ ಸೇರಿ ಒಂದು ಮನವಿ ಪತ್ರ ಸಿದ್ಧಪಡಿಸಿ.
  2. PDO ಭೇಟಿ ಮಾಡಿ:
    ಗ್ರಾಮ ಪಂಚಾಯಿತಿಗೆ ಹೋಗಿ, ಪಿಡಿಒ (PDO) ಅವರಿಗೆ ಮನವಿ ಕೊಟ್ಟು, “ನಮ್ಮ ಹೊಲ ನಮ್ಮ ದಾರಿ” ಯೋಜನೆಯಡಿ ರಸ್ತೆ ಸೇರಿಸಲು ಹೇಳಿ.
  3. ಗ್ರಾಮ ಸಭೆ ತಪ್ಪಿಸಬೇಡಿ:
    ಇದು ಅತಿ ಮುಖ್ಯ! ಗ್ರಾಮ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಅಲ್ಲಿ ಅನುಮೋದನೆ ಪಡೆದರೆ ಮಾತ್ರ ಕೆಲಸ ಆಗುವುದು.
  4. ಶಾಸಕರ ಬೆಂಬಲ:
    ನಿಮ್ಮ ಕ್ಷೇತ್ರದ ಶಾಸಕರನ್ನು ಭೇಟಿಯಾಗಿ, ಈ ರಸ್ತೆಗೆ ಶಿಫಾರಸು ಮಾಡಲು ಕೇಳಿಕೊಳ್ಳಿ (ಶಾಸಕರ ಪಾತ್ರ ಇಲ್ಲಿ ಮುಖ್ಯವಾಗಿರುತ್ತದೆ).
  5. ಕೊನೆಯ ಮಾತು:
    ರೈತ ಮಿತ್ರರೇ, ರಸ್ತೆ ಚೆನ್ನಾಗಿದ್ದರೆ ಅರ್ಧ ಕಷ್ಟ ತೀರಿದಂತೆ. ಸುಮ್ಮನೆ ಕೂತರೆ ರಸ್ತೆ ಆಗಲ್ಲ. ಇಂದೇ ನಿಮ್ಮ ಪಂಚಾಯಿತಿಗೆ ಹೋಗಿ ವಿಚಾರಿಸಿ.

ಇಂದೇ ನಿಮ್ಮ ಪಂಚಾಯಿತಿಗೆ ಹೋಗಿ, ಈ ಯೋಜನೆಯನ್ನು ಚರ್ಚಿಸಿ, ರಸ್ತೆ ಮಾಡಿಸಿ, ಹೊಲಗಳಿಗೆ ಆಧುನಿಕ ಬೇಸಾಯಕ್ಕೆ ಅಗತ್ಯವಿರುವ ವಾಹನಗಳನ್ನು ಸಾಗಿಸಿ ಮತ್ತು ಬೆಳೆಗಳನ್ನು ಸುಲಭವಾಗಿ ಮಾರುಕಟ್ಟೆಗೆ ಸಾಗಿಸಿ!

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ guptasinstitute.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

applications-invited-for-amrutha-swabhimani-scheme

ರಾಜ್ಯ ಸರ್ಕಾರದಿಂದ ಕುರಿ ಸಾಕಾಣಿಕೆಗೆ 43,750 ರೂ. ಸಹಾಯಧನ: ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ ಡೈರೆಕ್ಟ್ ಲಿಂಕ್ ಇಲ್ಲಿದೆ!

90-subsidy-on-mini-tractors-and-agricultural-machinery

ರೈತರಿಗೆ ಗುಡ್ ನ್ಯೂಸ್ : ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರಗಳಿಗೆ ಶೇ. 90 ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

free-gas-cylinder-and-stove

ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ : ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ

krushi-honda-subsidy

Krushi honda subsidy: ರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ! ಇಲ್ಲಿದೆ ಸಂಪೂರ್ಣ ಮಾಹಿತಿ

ಶಕ್ತಿ ಯೋಜನೆ | smart-card-for-shakti-yojana

ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ: ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ!

karnataka-ashraya-vasathi-yojane

ಬಂಪರ್ ಸುದ್ದಿ! ಬಾಡಿಗೆ ಮನೆಯ ಚಿಂತೆಗೆ ಗುಡ್ ಬೈ! ಕರ್ನಾಟಕ ಸರ್ಕಾರದಿಂದ ₹2 ಲಕ್ಷ ಉಚಿತ ಹಣ ಸ್ವಂತ ಮನೆ ಕಟ್ಟಲು! ಆಶ್ರಯ ವಸತಿ ಯೋಜನೆ – ಈಗಲೇ ಅರ್ಜಿ ಹಾಕಿ

Leave a Comment