ಇಂಡಿಯನ್ ಆಯಿಲ್ (IOCL) ಮಾರ್ಕೆಟಿಂಗ್ ಡಿವಿಜನ್ನಲ್ಲಿ ಒಟ್ಟು 501 ಜನರಿಗೆ ಅಪ್ರೆಂಟಿಸ್ ತರಬೇತಿ ಹುದ್ದೆಗಳ ನೇಮಕಾತಿಗೆ ಘೋಷಣೆ ಮಾಡಲಾಗಿದೆ! ಐಟಿಐ, ಡಿಪ್ಲೊಮಾ, ಡಿಗ್ರಿ ಮುಗಿಸಿದವರಿಗೆ ಗೋಲ್ಡನ್ ಆಪರ್ಚ್ಯುನಿಟಿ. ಒಳ್ಳೆಯ ಸ್ಟೈಫಂಡ್ ಜೊತೆಗೆ ಭಾರತದ ನಂ.1 ಕಂಪನಿಯಲ್ಲಿ ಎಕ್ಸ್ಪೀರಿಯನ್ಸ್ ಮತ್ತು ಭವಿಷ್ಯದಲ್ಲಿ ಶಾಶ್ವತ ಉದ್ಯೋಗಕ್ಕೂ ದಾರಿ ಆಗುವ ಅವಕಾಶ ಇದೆ!
ಸರ್ಕಾರಿ ಸಂಸ್ಥೆಗಳಲ್ಲಿ ಟ್ರೈನಿಂಗ್ ಮಾಡಿ ಅನುಭವ ಕಲೆ ಹಾಕ್ಬೇಕು, ನಂತರ ಪಕ್ಕಾ ಜಾಬ್ ಹುಡುಕೋ ಪ್ಲ್ಯಾನಾ, ಹಾಗೇನಾದ್ರೂ
ಇದ್ರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ IOCL ನಲ್ಲಿ ಬಂದಿರುವ ಈ ಅಪ್ರೆಂಟಿಸ್ ಅವಕಾಶವನ್ನು ತಪ್ಪಿಸ್ಕೊಳ್ಳ್ಬೇಡಿ.
IOCL ಮಾರ್ಕೆಟಿಂಗ್ ಡಿವಿಷನ್ ನಲ್ಲಿ 1961 ರ ಅಪ್ರೆಂಟಿಸ್ ಕಾಯ್ದೆಯಡಿ ಒಟ್ಟು 501 ಅಪ್ರೆಂಟಿಸ್ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್ ಎಲ್ಲ ಕೇಟಗರಿಗಳಲ್ಲೂ ಅವಕಾಶಗಳಿವೆ.
ಹುದ್ದೆಗಳ ವಿವರ
ಒಟ್ಟು ಅಪ್ರೆಂಟಿಸ್ ಹುದ್ದೆಗಳು – 501
ಹುದ್ದೆಗಳ ಪ್ರಕಾರ
- ಟ್ರೇಡ್ ಅಪ್ರೆಂಟಿಸ್
- ಟೆಕ್ನಿಷಿಯನ್ ಅಪ್ರೆಂಟಿಸ್
- ಗ್ರಾಜುಯೇಟ್ ಅಪ್ರೆಂಟಿಸ್
ಇದನ್ನೂ ಓದಿರಿ: ಬೆಂಗಳೂರು ಮೆಟ್ರೋ (BMRCL) ನೇಮಕಾತಿ 2025 : ಲಿಖಿತ ಪರೀಕ್ಷೆ ಇಲ್ಲ, ಅರ್ಜಿ ಶುಲ್ಕ ಇಲ್ಲ ! 2 ಲಕ್ಷ ರೂಪಾಯಿ ವರೆಗೆ ಮಾಸಿಕ ವೇತನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ – ಡಿಸೆಂಬರ್ 27, 2025
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 12, 2025
ಶೈಕ್ಷಣಿಕ ಅರ್ಹತೆ
ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಗಳಲ್ಲಿ ಒಂದನ್ನಾದರೂ ಪೂರ್ಣಗೊಳಿಸಿರಬೇಕು.
ಟ್ರೇಡ್ ಅಪ್ರೆಂಟಿಸ್ – ಸಂಬಂಧಿತ ಟ್ರೇಡ್ ನಲ್ಲಿ ITI ಪಾಸು ಆಗಿರಬೇಕು
ಟೆಕ್ನಿಷಿಯನ್ ಅಪ್ರೆಂಟಿಸ್ – ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ Diploma Engineering
ಗ್ರಾಜುಯೇಟ್ ಅಪ್ರೆಂಟಿಸ್ – ಸಂಬಂಧಿತವಾದ ಶಾಖೆಯಲ್ಲಿ Degree Graduation
ಕೆಲವು ಹುದ್ದೆಗಳಿಗಂತೂ 12ನೇ ತರಗತಿ ಪಾಸು ಕೂಡ ಅರ್ಹತೆಯಾಗಿ ಕೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿವರವಾದ ನೋಟಿಫಿಕೇಶನ್ ನೋಡ್ಬೇಕು.
ವಯೋಮಿತಿ
31-12-2025 ರಂತೆ
ಕನಿಷ್ಠ ವಯಸ್ಸು 18 ವರ್ಷ
ಗರಿಷ್ಠ ವಯಸ್ಸು 24 ವರ್ಷ
ವಯೋಮಿತಿ ಸಡಿಲಿಕೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
- OBC NCL ಅಭ್ಯರ್ಥಿಗಳಿಗೆ 3 ವರ್ಷ
- PwBD ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
ಅಂದರೆ, ಮೀಸಲಾತಿ ನಿಯಮದ ಪ್ರಕಾರ ಹೆಚ್ಚಿನ ವಯಸ್ಸಿನವರಿಗೂ ಅವಕಾಶ ಸಿಗುತ್ತದೆ.
ಇದನ್ನೂ ಓದಿರಿ: ಹಿಂದೂಸ್ತಾನ್ ಶಿಪ್ಯಾರ್ಡ್ (HSL) ನೇಮಕಾತಿ 2026, ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 13
ಆಯ್ಕೆ ಪ್ರಕ್ರಿಯೆ
- ಶಾರ್ಟ್ ಲಿಸ್ಟಿಂಗ್
ನಿಮ್ಮ ಅಕಾಡೆಮಿಕ್ ಕ್ವಾಲಿಫಿಕೇಷನ್ ಮತ್ತು ಮಾರ್ಕ್ಸ್ ಆಧಾರದಲ್ಲಿ ಅರ್ಹರನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ - ದಾಖಲೆ ಪರಿಶೀಲನೆ
ಅರ್ಜಿ ಹಂತದಲ್ಲಿ ನೀಡಿರುವ ಎಲ್ಲಾ ಮಾಹಿತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ - ವೈದ್ಯಕೀಯ ಪರೀಕ್ಷೆ
ಅಂತಿಮವಾಗಿ Medical Fitness Test ಮುಖಾಂತರ ಆಯ್ಕೆ ಖಚಿತಗೊಳಿಸಲಾಗುತ್ತದೆ
ಸಂಬಳ
IOCL Apprentice ಗಳಿಗೆ
ಸರ್ಕಾರದ ಅಪ್ರೆಂಟಿಸ್ ನಿಯಮಗಳ ಪ್ರಕಾರ ಟ್ರೇಡ್ ಗಳು ಯಾವ ಶ್ರೇಣಿಗೆ ಆಯ್ಕೆಯಾಗುತ್ತಾರೋ ಅದಕ್ಕೆ ತಕ್ಕಂತೆ ಮಾಸಿಕ ಸ್ಟೈಪಂಡ್ ಕೊಡಲಾಗುತ್ತದೆ
ಅದಕ್ಕೆ ಹೆಚ್ಚುವರಿಯಾಗಿ
ಇತರ ವೆಚ್ಚಗಳಿಗಾಗಿ ಅಪ್ರೆಂಟಿಸ್ ಗಳಿಗೆ ತಿಂಗಳಿಗೆ 2500 ರೂ ಹೆಚ್ಚುವರಿ ಮೊತ್ತ ಪಾವತಿಸಲಾಗುತ್ತದೆ. ಇದರಿಂದ Freshers ಗೆ ಓದು ಮುಗಿಸಿ ತಕ್ಷಣ ಕೈಗೆ ಹಣ ಸಿಗೋ ತರಹದ ಟ್ರೇನಿಂಗ್ ಹುದ್ದೆ ಆಗಿರುವುದರಿಂದ ಇದು ಆಕರ್ಷಕವಾಗಿದೆ.
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕದ ಬಗ್ಗೆ ನೋಟಿಫಿಕೇಶನ್ ನಲ್ಲಿ ಪ್ರಸ್ತಾಪ ಇಲ್ಲ. ಹೀಗಾಗಿ ಸಾಮಾನ್ಯವಾಗಿ ಶುಲ್ಕ ಇಲ್ಲ ಅಥವಾ ತುಂಬಾ ಕಡಿಮೆ ಇರುವ ಸಾಧ್ಯತೆ ಇದೆ. ನೋಟಿಫಿಕೇಶನ್ ಓದಿ ಖಚಿತಪಡಿಸಿಕೊಳ್ಳಿ.
ಹೇಗೆ ಆನ್ ಲೈನ್ ಮೂಲಕ ಅರ್ಜಿ ಹಾಕೋದು ?
ಟ್ರೇಡ್ ಅಪ್ರೆಂಟಿಸ್ ITI ಅಭ್ಯರ್ಥಿಗಳು
- NAPS ಅಧಿಕೃತ ವೆಬ್ಸೈಟ್ apprenticeshipindia.gov.in ಗೆ Visit ಮಾಡಿ.
- ಹೊಸ ಅಭ್ಯರ್ಥಿಗಳಾಗಿದ್ದರೆ ಮೊದಲು Registration ಮಾಡಿ. ಪರ್ಸನಲ್ ಡೀಟೈಲ್ಸ್, Qualification, ITI Trade ಇತ್ಯಾದಿ ಭರ್ತಿ ಮಾಡಿ.
- Login ಆದ ಬಳಿಕ Search bar ನಲ್ಲಿ Indian Oil Corporation Limited Apprentice ಎಂದು ಹುಡುಕಿ
1961ರ Apprentice Act ಅಡಿಯಲ್ಲಿ IOCL recruitment notification ಕಂಡು ಬಂದ ನಂತರ Apply option ಒತ್ತ
ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ Diploma ಹಾಗೂ Degree ಅಭ್ಯರ್ಥಿಗಳು
- NATS ಅಧಿಕೃತ ವೆಬ್ಸೈಟ್ nats.education.gov.in student register.php ಗೆ Visit ಮಾಡಿ.
- Student Registration ಮೂಲಕ ನಿಮ್ಮ ಶಿಕ್ಷಣ, ಕಾಲೇಜು, ಬ್ರಾಂಚ್ ಎಲ್ಲ ವಿವರಗಳನ್ನು ನೀಡಿ ನೋಂದಾಯಿಸಿ.
- Login ಆಗಿ Opportunities section ನಲ್ಲಿ Indian Oil Corporation Limited Apprentice Recruitment ಎಂಬ ಅವಕಾಶ ಹುಡುಕಿ ಮತ್ತು Apply ಮಾಡಿ
ಮೈಕ್ರೋಸಾಫ್ಟ್ ಆಫೀಸ್ ಫಾರ್ಮ್ ತುಂಬುವದು ತುಂಬಾ ಮುಖ್ಯ
NAPS ಅಥವಾ NATS ಪೋರ್ಟಲ್ ನಲ್ಲಿ ನೀವು ಯಶಸ್ವಿಯಾಗಿ ಅರ್ಜಿ ಹೂಡಿದ ಮೇಲೆ
- Microsoft Office Forms ಅಧಿಕೃತ ಲಿಂಕ್ forms.office.com r JtB9aJALr 9 ತೆರೆಯಿರಿ.
- ಅಲ್ಲಿ ಕೇಳಲಾಗುವ
ಹುದ್ದೆಯ ಪ್ರಕಾರ
Registration number
ವೈಯಕ್ತಿಕ ಮಾಹಿತಿ
ಸಂಪರ್ಕ ವಿಳಾಸ ಇತ್ಯಾದಿ ಎಲ್ಲಾ ಮಾಹಿತಿಯನ್ನು ಗಮನ ನೀಡಿ ತುಂಬಿ Submit ಮಾಡಿ. ಈ ಎರಡೂ ಹಂತ ಮುಗಿಸಿದ ನಂತರವೇ ನಿಮ್ಮ ಅರ್ಜಿ IOCL ಸಿಸ್ಟಂನಲ್ಲಿ Complete ಆಗಿ ಪರಿಗಣಿಸಲಾಗುತ್ತದೆ.
IOCL ತರಹದ ಮಹತ್ವದ ಪಬ್ಲಿಕ್ ಸೆಕ್ಟರ್ ಕಂಪನಿಯಲ್ಲಿ Apprentice ಆಗಿ ಕೆಲಸ ಮಾಡಿದರೆ, Core Industry ಅನುಭವ,
ಮಹತ್ವದ ಸಂಸ್ಥೆಯ ಹೆಸರು ಇರುವ Certificate, ಮುಂದೆ Private Company ಅಥವಾ Government job ಗೆ apply ಮಾಡುವಾಗ Plus Point.
12ನೇ, ITI, Diploma, Degree ಮುಗಿಸಿ ಕೆಲಸ ಹುಡುಕೋ ಯುವಕರಿಗೆ ಇದು ಒಂದು best entry point ಆಗಬಹುದು. ಕನ್ನಡಿಗ ಅಭ್ಯರ್ಥಿಗಳು ತಮ್ಮ Zone ನೆನಪು ಇಟ್ಟುಕೊಂಡು, notification ನಲ್ಲಿ ನೀಡಿರುವ ರಾಜ್ಯವಾರು ಹುದ್ದೆಗಳ ವಿವರಗಳನ್ನು ಓದಿ, ಸಮಯ ಕಳೆದುಕೊಳ್ಳದೆ Apply ಮಾಡಿ.







